Enquire Now!

ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ಪ್ರಯೋಜನಗಳು

 

ಮಗುವನ್ನು ಹೆರುವ ಪ್ರಕ್ರಿಯೆಯು ವೃತ್ತಿಯನ್ನು ಆಯ್ಕೆ ಮಾಡುವ ಮತ್ತು ಅವರ ಕಾರ್ಯಸ್ಥಳದಲ್ಲಿನ ಯಶಸ್ಸಿಗೆ ಪ್ರಯತ್ನಿಸುವ ಅವರ ಹಾದಿಯಲ್ಲಿ ನೆಲೆಗೊಳ್ಳುವಲ್ಲಿನ ಮಹಿಳೆಯ ಕನಸನ್ನು ಕೊನೆಗೊಳಿಸಬಾರದು.ಇದನ್ನು ಗಮನದಲ್ಲಿರಿಸಿ, ತಾಯ್ತನದ ಘನತೆಯನ್ನು ಉಳಿಸುವ ಮೂಲಕ ಮತ್ತು ತಾಯಿ ಹಾಗೂ ಮಗುವಿನ ಆರೋಗ್ಯವನ್ನು ರಕ್ಷಿಸುವ ಮೂಲಕ ಮಗುವಿನೊಂದಿಗಿನ ತಾಯಿಯ ಬಾಂಧವ್ಯ ಬೆಸೆಯಲು ಸಮಯ ಮತ್ತು ಅವಕಾಶಕ್ಕೆ ಅನುವು ಮಾಡುವ ಮೂಲಕ ಖಾಸಗಿ ಮತ್ತು ಸರಕಾರಿ ಸಂಸ್ಥೆಗಳಲ್ಲಿನ ಮಹಿಳಾ ಉದ್ಯೋಗಿಗಳ ಹಕ್ಕುಗಳನ್ನು ರಕ್ಷಿಸುವ ಖಾತ್ರಿಯನ್ನು ಸರಕಾರವು ನೀಡಿದೆ. ಆದರೂ, ಕಾಯಿದೆಯ ಅಧಿನಿಯಮಗೊಳಿಸುವಿಕೆ ಮತ್ತು ಸಮಕಾಲಿಕ ಸಿಬ್ಬಂದಿ ರೂಢಿಯ ಸಂದರ್ಭ ಮತ್ತು ಪ್ರಸಕ್ತ ಸಾಮಾಜಿಕ ಪ್ರವೃತ್ತಿಗಳ ಅಳವಡಿಕೆಗೆ ಸಾಂವಿಧಾನಿಕ ಮೂಲ ಮತ್ತು ಕಾರಣಗಳನ್ನು ತಿಳಿದುಕೊಳ್ಳುವುದು ಅಗತ್ಯ.

ಈ ಕೋರ್ಸ್ ಹೆರಿಗೆ ಪ್ರಯೋಜನ ಕಾಯಿದೆ, 1961ರ ಮೂಲಭೂತ ತತ್ವಗಳು, ಅದರ ಸಾಂವಿಧಾನಿಕ ಮೂಲ ಮತ್ತು ಇತಿಹಾಸ, ಅದರಲ್ಲಿರುವ ವಿವಿಧ ವಿಭಾಗಗಳು, ಹೆರಿಗೆ ರಜೆಗಳ ವಿವಿಧ ವಾಸ್ತವಗಳೊಂದಿಗೆ ವ್ಯವಹರಿಸುವಿಕೆ, ಆ ಹಕ್ಕುಗಳನ್ನು ತಿಳಿದುಕೊಳ್ಳುವಲ್ಲಿ ತಡೆಯುಂಟುಮಾಡಬಹುದಾದ ಸಂದರ್ಭಗಳು ಮತ್ತು ಸ್ಥಿತಿಗಳು, ಅಂತಹ ಹಕ್ಕುಗಳು ಉಲ್ಲಂಘನೆಯಾದಾಗ ತೆಗೆದುಕೊಳ್ಳಬೇಕಾದ ಕ್ರಮಗಳು ಮುಂತಾದವುಗಳನ್ನು ವಿವರಿಸುತ್ತದೆ. ಈ ಕೋರ್ಸ್ ಒಂದು ವೇಳೆ ಮಾಲೀಕರಿಂದ ಉಲ್ಲಂಘನೆಯಾದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಮುಂತಾದ ಸ್ವಾಭಾವಿಕ ಹಕ್ಕುಗಳ ಬಳಕೆಗೆ ಅನ್ವಯವಾಗುವ ಕಾನೂನುಗಳ ಆಳದ ಜ್ಞಾನವನ್ನು ನೀಡುವುದರಿಂದ ಕಾರ್ಯಸ್ಥಳದಲ್ಲಿ ಮಹಿಳೆಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಕೋರ್ಸ್ ಪರಿಣಾಮ

 
 

ಈ ಕೋರ್ಸ್ ಪೂರ್ಣಗೊಂಡ ಬಳಿಕ ನೀವು ಶಕ್ತರಾಗುವಿರಿ:

  • ಭಾರತದಲ್ಲಿ ಹೆರಿಗೆ ಪ್ರಯೋಜನ ಕಾನೂನಿನ ಬೆಳವಣಿಗೆ ಮತ್ತು ಅಭಿವೃದ್ಧಿ ಮತ್ತು ಹೆರಿಗೆ ಹಕ್ಕುಗಳನ್ನು ರಕ್ಷಿಸುವಲ್ಲಿ ಕಡ್ಡಾಯವಾಗಿರುವ ಸಾಂವಿಧಾನಿಕ ನಿಬಂಧನೆಗಳನ್ನು ವಿವರಿಸಲು
  • ಹೆರಿಗೆ ಪ್ರಯೋಜನ ಕಾಯಿದೆ, 1961 ಅದರ ಸಮಗ್ರತೆಯಲ್ಲಿ ಪ್ರಾಮುಖ್ಯತೆಯನ್ನು ಮತ್ತು ಜಾಗತಿಕ ಹೆರಿಗೆ ಕಾನೂನು ಮಾನದಂಡಗಳ ತುಲನಾತ್ಮಕ ಕ್ಷೇತ್ರದಲ್ಲಿನ ಅದರ ಧೋರಣೆಯನ್ನು ತಿಳಿದುಕೊಳ್ಳಲು
  • ತಕ್ಷಣದ ಸವಾಲುಗಳನ್ನು ಎದುರಿಸುವ ಮೂಲಕ ಚಾಲ್ತಿಯಲ್ಲಿರುವ ಸನ್ನಿವೇಶಗಳನ್ನು ಹೇಗೆ ಅಭಿವೃದ್ಧಿಪಡಿಸುವುದು ಎಂಬುದರ ಬಗ್ಗೆ ಹೆಚ್ಚಿನ ಸಂಶೋಧನೆ (ಅಂಕಿಅಂಶ, ವರದಿಗಳು, ನಿಲುವುಗಳು) ಬೆಂಬಲದೊಂದಿಗೆ ವಿವೇಚನೆಯ ಸಲಹೆಗಳನ್ನು ಉಂಟುಮಾಡಲು

ಕೋರ್ಸ್ ರೂಪರೇಖೆ

 
 
  • ಮಾದರಿ 1 – ಪರಿಚಯ
  • ಮಾದರಿ 2 – ಹೆರಿಗೆ ಪ್ರಯೋಜನ ಕಾಯಿದೆ, 1961
  • ಮಾದರಿ 3 – ಖಾಸಗಿ ಮತ್ತು ಸರಕಾರಿ ಸಂಸ್ಥೆಗಳಲ್ಲಿ ಹೆರಿಗೆ ಪ್ರಯೋಜನ
  • ಮಾದರಿ 4 – ತೀರ್ಮಾನ
  • ಪ್ರಮಾಣ ಪತ್ರ ಪರೀಕ್ಷೆ/ಮೌಲ್ಯಮಾಪನ

CERTIFICATION

 

Honors Badge

ಈ ಕೋರ್ಸನ್ನು ಯಾರು ಪಡೆಯಬೇಕು?

  • ವಕೀಲರು
  • ಕಾನೂನು ಸಲಹೆಗಾರರು ಮತ್ತು ನ್ಯಾಯವಾದಿ
  • ಮಹಿಳಾ ಸಿಬ್ಬಂದಿ
  • ಕಾನೂನು ವಿದ್ಯಾರ್ಥಿಗಳು ಮತ್ತು ಸಂಶೋದಕರು
  • ಹೆರಿಗೆ ಪ್ರಯೋಜನ ಕಾಯಿದೆ ಕಲಿಕೆಯಲ್ಲಿ ಆಸಕ್ತಿಯಿರುವ ಇತರ ಭಾಗೀದಾರರು

ಹಂತ: ಆರಂಭಿಗ

ಭಾಷೆ: ಇಂಗ್ಲೀಷ್

ಅವಧಿ: 6 ತಿಂಗಳು

ಮೌಲ್ಯಮಾಪನ ವಿಧಾನ

ವಿದ್ಯಾರ್ಥಿಗಳು ಕೋರ್ಸಿನ ಕೊನೆಯಲ್ಲಿ ಪರೀಕ್ಷೆ ಬರೆಯಬೇಕು ಮತ್ತು ಕೋರ್ಸ್ ಪ್ರಮಾಣಪತ್ರ ಪಡೆದುಕೊಳ್ಳಲು ಕನಿಷ್ಟ 50% ಅಂಕಗಳನ್ನು ಪಡೆಯಬೇಕು.

ಲೇಖಕರ ಬಗ್ಗೆ

ಅನನ್ಯ ಸರ್ಕಾರ್ ದೆಹಲಿಯಲ್ಲಿ ಅಡ್ವೋಕೇಟ್ ಆಗಿದ್ದು, ಭಾರತೀಯ ಸರ್ವೋಚ್ಛ ನ್ಯಾಯಾಲಯದ ಹಿರಿಯ ಅಡ್ವೋಕೇಟ್ ಪದ್ಮ ಭೂಷಣ್ ಪಿಪಿ ರಾವ್ ಅವರ ಮಾರ್ಗದರ್ಶನದಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಅವರು ಕಾರ್ಪೋರೇಟ್‌ನಲ್ಲಿ ಕಾನೂನು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಭುವನೇಶ್ವರ್‌ನ ಕೆಐಐಟಿ ಲಾ ಶಾಲೆಯಲ್ಲಿ ಟ್ಯಾಕ್ಸೇಶನ್ ಕಾನೂನುಗಳಲ್ಲಿ ಪರಿಣಿತಿಯೊಂದಿಗೆ ಪದವಿಯನ್ನು ಪಡೆದಿದ್ದಾರೆ.

Learners who viewed in this course, also viewed:

Let’s Start Chatbot