Enquire Now!

ವೈದ್ಯಕೀಯ ನಿಯಮಗಳು

 

ರೋಗಿಗಳ ಹಿತಾಸಕ್ತಿಗಾಗಿ ವೈದ್ಯಕೀಯ ವೃತ್ತಿಪರರು ಯಾವಾಗಲೂ ಆಯ್ಕೆಗಳನ್ನು ಮಾಡಬೇಕು. ಆದಾಗ್ಯೂ, ಆರೋಗ್ಯ ಸುರಕ್ಷಾ ಸನ್ನಿವೇಶಗಳು ಮತ್ತು ವ್ಯವಸ್ಥೆಗಳು ಸಂಕೀರ್ಣವಾಗಿವೆ, ಹಾಗೂ ಸಂದರ್ಭವನ್ನು ಎದುರಿಸಬೇಕಾದಾಗ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಬಹುಶಃ ಕಷ್ಟವಾಗಬಹುದು. ವೈದ್ಯಕೀಯ-ಕಾನೂನು ಮೊಕದ್ದಮೆಗಳು ವೇಗವಾಗಿ ಹೆಚ್ಚುತ್ತಿರುವಾಗ ವೈದ್ಯಕೀಯ ವೃತ್ತಿಪರರು ತಮ್ಮ ಕ್ರಮಗಳಿಂದ ಮತ್ತು ನಿರ್ಧಾರಗಳಿಂದ ತಮಗೆ ಮತ್ತು ತಮ್ಮ ರೋಗಿಗಳಿಗೆ ಹೆಚ್ಚಾಗಿ ಆಗಬಹುದಾದ ಕಾನೂನು ತೊಡಕುಗಳನ್ನು ಅರ್ಥಮಾಡಿಕೊಳ್ಳ ಬೇಕಾಗಿರುವುದು ಅತ್ಯಗತ್ಯವಾಗಿದೆ. ಹಾಗೆಯೇ, ವೈದ್ಯಕೀಯ ಕಾನೂನು ಸಂಬಂಧಿತ ಮೊಕದ್ದಮೆಗಳನ್ನು ನಿಭಾಯಿಸಲು ಇಚ್ಛಿಸುವ ಕಾನೂನು ವೃತ್ತಿಪರರು, ತಮ್ಮ ವೈಯಕ್ತಿಕ ನಂಬಿಕೆಗಳ ದೃಷ್ಟಿಯಿಂದ ಸಂಕೀರ್ಣ ಆರೋಗ್ಯ ಸುರಕ್ಷಾ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಪಡುತ್ತಾರೆ. ಹೀಗೆ, ಯಶಸ್ವಿಯಾಗಿ ಆಚರಿಸಲು/ಅಭ್ಯಾಸ ಮಾಡಲು ವೈದ್ಯಕೀಯ ಮತ್ತು ಕಾನೂನು ವೃತ್ತಿಪರರಿಗೆ ವೈದ್ಯಕೀಯ ಕಾನೂನುಗಳನ್ನು ವಸ್ತುನಿಷ್ಠವಾಗಿ ಅರ್ಥ ಮಾಡಿಕೊಳ್ಳುವುದು ಮಹತ್ವವಾಗಿದೆ.

ವೈದ್ಯಕೀಯ ಕಾನೂನುಗಳ ಈ ಪಠ್ಯ ತರಬೇತಿಯು ವೈದ್ಯಕೀಯ ಮಾರ್ಗದರ್ಶಿ ಸೂತ್ರಗಳು, ವೈದ್ಯಕೀಯ ನೀತಿಗಳ ಗುರುತರ ತೀರ್ಪುಗಳು ಮತ್ತು ವೈದ್ಯಕೀಯ ನಿರ್ಲಕ್ಷ್ಯದ ದಾವೆಗಳನ್ನು ತಡೆಗಟ್ಟುವ ಹಾಗೂ ಸಮರ್ಥಿಸುವ ಪರಿಣಾಮಕಾರಿ ತಂತ್ರಗಳ ಪರಿಕಲ್ಪನಾ ಮತ್ತು ಪ್ರಾಯೋಗಿಕ, ಎರಡೂ ರೀತಿಯ ಅನ್ವಯವನ್ನು ನೀಡುತ್ತದೆ. ಆರೋಗ್ಯ ಸುರಕ್ಷಾ ಕ್ಷೇತ್ರದಲ್ಲಿ ಒಳಗೊಂಡಿರುವ ತೊಂದರೆಗಳು ಹಾಗೂ ಸಮಸ್ಯೆಗಳ ಬಗ್ಗೆ ಸ್ವತಂತ್ರವಾಗಿ ಆಲೋಚಿಸುವ ಮತ್ತು ಅವುಗಳಿಗೆ ಸೂಕ್ಷ್ಮಸಂವೇದಿಯಾಗಬಲ್ಲ ಶಿಕ್ಷಣಾರ್ಥಿಗೆ ಸಹಾಯ ಮಾಡುವುದು ಈ ಪಠ್ಯ ತರಬೇತಿಯ ಪ್ರಮುಖ ಗುರಿಯಾಗಿದೆ.

ಕಲಿಕೆಯ ಫಲಿತಾಂಶ

 
 

ಈ ಪಠ್ಯ ತರಬೇತಿಯನ್ನು ಸಂಪೂರ್ಣಗೊಳಿಸಿದ ನಂತರ, ವೈದ್ಯಕೀಯ ವೃತ್ತಿಪರರು ಮತ್ತು ನಿರ್ವಾಹಕರು ಈ ಕೆಳಗಿನವುಗಳಲ್ಲಿ ಸಮರ್ಥರಾಗುತ್ತಾರೆ:

 • ದಿನನಿತ್ಯದ ವೈದ್ಯಕೀಯ ಆಚರಣೆಗಳಿಗೆ/ಅಭ್ಯಾಸಗಳಿಗೆ ಸಂಬಂಧಿಸಿರಬಹುದಾದ ವೈದ್ಯಕೀಯ-ಕಾನೂನು ತೊಡಕುಗಳನ್ನು ಗುರುತಿಸುವುದು.
 • ವೈದ್ಯಕೀಯ ನಿರ್ಲಕ್ಷ್ಯದ ದಾವೆಗಳನ್ನು ತಡೆಗಟ್ಟಲು ಮತ್ತು ಸಮರ್ಥಿಸಲು ಪರಿಣಾಮಕಾರಿಯಾಗಿ, ತಂತ್ರಗಳನ್ನು ಬಳಸುವುದು

ಈ ಪಠ್ಯ ತರಬೇತಿಯನ್ನು ಸಂಪೂರ್ಣಗೊಳಿಸಿದ ನಂತರ, ವಕೀಲರು ಈ ಕೆಳಗಿನವುಗಳಲ್ಲಿ ಸಮರ್ಥರಾಗುತ್ತಾರೆ:

 • ವಿವಿಧ ವೈದ್ಯಕೀಯ-ಕಾನೂನು ಪರಿಸ್ಥಿತಿಗಳಲ್ಲಿ ವೈದ್ಯರು ಮತ್ತು ಆಸ್ಪತ್ರೆಗಳೊಂದಿಗೆ ಸಮಾಲೋಚನೆ ನಡೆಸುವುದು
 • ವೈದ್ಯಕೀಯ ನಿರ್ಲಕ್ಷ್ಯದ ದಾವೆಗಳಿಗೆ ಸಂಬಂಧಿಸಿ ತಮ್ಮ ಕಾನೂನು ಆಚರಣೆ/ಅಭ್ಯಾಸಗಳನ್ನು ಸುಧಾರಿಸಿಕೊಳ್ಳುವುದು.

ಪಠ್ಯ ತರಬೇತಿ ರೂಪರೇಖೆ

 
 
 • ಮಾದರಿ 1 – ವೈದ್ಯಕೀಯ ಕಾನೂನಿನ ಮೇಲ್ನೋಟ
 • ಮಾದರಿ 2 – ವೈದ್ಯಕೀಯ ನೀತಿಗಳ ಮೇಲ್ನೋಟ
 • ಮಾದರಿ 3 – ವೈದ್ಯರು ಹಾಗೂ ರೋಗಿಗಳ ಹಕ್ಕುಗಳು ಮತ್ತು ಕರ್ತವ್ಯಗಳು
 • ಮಾದರಿ 4 – ವೈದ್ಯಕೀಯ ದಾಖಲೆಗಳು
 • ಮಾದರಿ 5 – ವೈದ್ಯಕೀಯ ಮಾಹಿತಿಗೋಪ್ಯತೆಯ ಪರಿಚಯ
 • ಮಾದರಿ 6 – ಮಾಹಿತಿಯುಕ್ತ ಸಮ್ಮತಿ
 • ಮಾದರಿ 7 – ವೈದ್ಯಕೀಯ ನಿರ್ಲಕ್ಷ್ಯದ ಮೇಲ್ನೋಟ
 • ಪ್ರಮಾಣೀಕರಣ ಪರೀಕ್ಷೆ / ಮೌಲ್ಯೀಕರಣ / ನಿರ್ಧಾರ

CERTIFICATION

 

Honors Badge

ಈ ಪಠ್ಯ ತರಬೇತಿಯನ್ನು ಯಾರು ಪಡೆಯಬೇಕು?

 • ವೈದ್ಯರು
 • ದಾದಿಗಳು / ನರ್ಸ್‌ಗಳು
 • ಆಸ್ಪತ್ರೆಯ ನಿರ್ವಾಹಕರು
 • ವಕೀಲರು
 • ನ್ಯಾಯಶಾಸ್ತ್ರ ವಿದ್ಯಾರ್ಥಿಗಳು
 • ರೋಗಿಗಳು
 • ಆರೋಗ್ಯ ಸುರಕ್ಷಾ ಉದ್ಯಮದ ಭಾಗೀದಾರರು

ಹಂತ: ಆರಂಭಿಕ

ಭಾಷೆ: ಕನ್ನಡ

ಅವಧಿ: 6 ತಿಂಗಳು

ಮೌಲ್ಯಮಾಪನ ಕ್ರಮ

ಪ್ರತಿಯೊಂದು ಮಾದರಿಯ ಅಂತ್ಯದಲ್ಲಿ ರಸಪ್ರಶ್ನೆಗಳ ಹಾಗೂ ಕಾರ್ಯಯೋಜನೆಗಳ ಮೂಲಕ ಪ್ರಗತಿಯನ್ನು ಪರೀಕ್ಷಿಸಲಾಗುವುದು. ಪಠ್ಯ ತರಬೇತಿಯ ಅಂತ್ಯದಲ್ಲಿ ಕಲಿಕಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು ಹಾಗೂ ಪ್ರಮಾಣೀಕರಣವನ್ನು ಪಡೆಯಲು ಕೊನೇಪಕ್ಷ 50% ದಷ್ಟು ಅಂಕಗಳನ್ನು ಹೊಂದಿರಬೇಕು.

ಲೇಖಕರ ಬಗ್ಗೆ

ಡಾ.ವಿ.ಪಿ.ಸಿಂಘ್‌ ದಯಾನಂದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೆಡಿಕೋಲೀಗಲ್ ಎಕ್ಸ್ಪರ್ಟ್ ಮತ್ತು ಅಸೋಸಿಯೇಟ್ ಪ್ರೊಫೆಸರ್ (ಫರೆನ್ಸಿಕ್ ಮೆಡಿಸಿನ್). ಅವರು ಔಷಧ ಮತ್ತು ಕಾನೂನು ಎರಡೂ ಅರ್ಹತೆ ಇದೆ. ಅವರು ತಮ್ಮ ಎಂ.ಬಿ.ಬಿ.ಎಸ್. ಮತ್ತು ಜಿ.ಎಂ.ಸಿ ಪಟಿಯಾಲಾ ಮತ್ತು ಎಲ್.ಎಲ್.ಬಿ.ನಿಂದ ಫೊರೆನ್ಸಿಕ್ ಮೆಡಿಸಿನ್ನಲ್ಲಿ ಎಂ.ಡಿ. ಯುಐಎಲ್ಎಸ್, ಪಂಜಾಬ್ ವಿಶ್ವವಿದ್ಯಾಲಯದಿಂದ. ಅವರು ವೈದ್ಯಕೀಯ ಕಾನೂನುಗಳು ಮತ್ತು ಹೆಲ್ತ್ಕೇರ್ ಕ್ವಾಲಿಟಿ ಮ್ಯಾನೇಜ್ಮೆಂಟ್, ಪಿಜಿಡಿ ಮೆಡಿಕೊ-ಲೀಗಲ್ ಸಿಸ್ಟಮ್ನಲ್ಲಿ ಸರ್ಟಿಫಿಕೇಟ್ ಕೋರ್ಸ್ಗಳನ್ನು ಪೂರ್ಣಗೊಳಿಸಿದ್ದಾರೆ. ಡಾ. ಸಿಂಗ್ "ವೈದ್ಯಕೀಯ ಪ್ರಾಕ್ಟೀಸ್ನಲ್ಲಿ ಕಾನೂನು ಸಮಸ್ಯೆಗಳು, ಸೇಫ್ ಪ್ರಾಕ್ಟೀಸ್ಗಾಗಿ ವೈದ್ಯಕೀಯ-ಕಾನೂನು ಮಾರ್ಗದರ್ಶನ" ಪುಸ್ತಕಕ್ಕೆ ಕೊಡುಗೆಗಳನ್ನು ನೀಡಿದ್ದಾರೆ.

Learners who viewed in this course, also viewed:

Let’s Start Chatbot