Enquire Now!

ಒಪ್ಪಂದ ಕಾನೂನು

 

ಒಪ್ಪಂದಗಳು ಎನ್ನುವುದು ವ್ಯಾಪಾರ ಕಾರ್ಯಗಳ ಸುಗಮವಾದ ನಿರ್ವಹಣೆಗಾಗಿ ಅತ್ಯಂತ ಅವಶ್ಯಕವಾದ ಸಲಕರಣೆಗಳು. ಪ್ರತಿಯೊಂದು ವಾಣಿಜ್ಯ ಅಥವಾ ವ್ಯಾಣಿಜ್ಯೇತರ ಸಂಸ್ಥೆಗಳು ಸೇವೆಯ, ಆಗಬಹುದಾದ ಕ್ರಮಗಳ ಊಹೆ, ಮತ್ತು ಒಪ್ಪಿದ ನಿಯಮಗಳ ಕಾರ್ಯಾಚರಣೆಯ ನಿಶ್ಚಿತತೆಯನ್ನು ಖಚಿತಪಡಿಸಿಕೊಳ್ಳಲು ಒಪ್ಪಂದಗಳು ಮತ್ತು ಕರಾರುಗಳನ್ನು ಪ್ರವೇಶಿಸುತ್ತವೆ ಆದರೆ ಒಪ್ಪಂದ ಜಾರಿಯು ಎರಡೂ ಪಕ್ಷಗಳು ಅದನ್ನು ಒಪ್ಪಿದ ನಂತರ ತೆರೆಗೆ ಬರುತ್ತದೆ, ಒಪ್ಪಂದ ಅತ್ಯಂತ ಕ್ಲಿಷ್ಟಕರ ಮತ್ತು ಚಾಣಾಕ್ಷತನವು ಅದರ ರಚನೆಯಲ್ಲಿರುತ್ತದೆ. ಒಪ್ಪಂದದ ರಚನೆಯಲ್ಲಿ ವ್ಯಾಪಾರದ ಪರಿಜ್ಞಾನ, ಒಪ್ಪಂದ ಕಾನೂನುಗಳು ಮತ್ತು ಬರವಣಿಗೆ ಕೌಶಲ್ಯಗಳು ಒಳಗೊಂಡಿರುತ್ತವೆ. ಒಂದು ತಪ್ಪಾಗಿ ರಚಿಸಿದ ಒಪ್ಪಂದವು ಪರ್ವರ್ತಿಸಲಾದ ಪರಿಣಾಮಗಳನ್ನು ಹೊಂದಿರಬಹುದು ಅಂತೆಯೇ ಒಪ್ಪಂದದಲ್ಲಿ ತೊಡಗಿರುವ ಪಕ್ಶಗಳಿಗೆ ಭಾರಿ ಆರ್ಥಿಕ ನಷ್ಟವನ್ನು ತರಬಹುದು. ಹಾಗಾಗಿ, ಒಂದು ಪರಿಣಾಮಕಾರಿ ಒಪ್ಪಂದವನ್ನು ರಚಿಸಲು ಎಲ್ಲರೂ ಸಕ್ಷಮರಾಗಿರುವುದಿಲ್ಲ.

ಈ ತರಬೇತಿಯು ನೀವು ಒಪ್ಪಂದ ಕಾನೂನಿನ ಮೂಲಭೂತತೆಗಳನ್ನು ಗ್ರಹಿಸಲು ಮತ್ತು ಒಪ್ಪಂದಗಳ ರಚನಾ ಕೌಶಲ್ಯವನ್ನು ಕಸಿ ಮಾಡಲು ಸಹಾಯಮಾಡುತ್ತದೆ. ಇದು ಉದ್ಭವಿಸುತ್ತಿರುವ ಪ್ರತಿನಿತ್ಯದ ಮತ್ತು ಸಂಕೀರ್ಣ ಒಡಂಬಡಿಕೆ ವ್ಯವಹಾರಗಳ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗಾಗಿ ಮೊಕದ್ದಮೆ ಅಧ್ಯಯನವನ್ನು ಬಳಸಿ ಸೂಕ್ತವಾದ ಪ್ರಾಯೋಗಿಕ ನಿಯೋಜನೆಗಳನ್ನು ಒದಗಿಸುತ್ತದೆ. ತರಬೇತಿಯು ಒಂದು ಒಪ್ಪಂದವನ್ನು ರಚಿಸಲು, ಸುತ್ರಿಕರಣಗೊಳಿಸಲು ಮತ್ತು ಜಾರಿಗೊಳಿಸುವುದಕ್ಕೆ ಸಂಬಂಧಪಟ್ಟ ವ್ಯಾಪಕ ಶ್ರೇಣಿಯ ಸಮಸ್ಯೆಗಳ ಬಗ್ಗೆ ಸೂಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ತರಬೇತಿಯ ಉಪಯೋಗ

 
 

ಈ ತರಬೇತಿಯ ಮುಕ್ತಾಯದ ನಂತರ, ನೀವು ಈ ಕೆಳಗಿನವುಗಳನ್ನು ಮಾಡಲು ಸಕ್ಷಮರಾಗಿರುತ್ತೀರಿ:

  • ಒಪ್ಪಂದ ಎಂದರೇನು, ಅದರ ಉದ್ದೇಶ ಮತ್ತು ಮಹತ್ವವೇನು ಎಂದು ಗುರುತಿಸುತ್ತೀರಿ
  • ಒಂದು ಒಪ್ಪಂದ ಅಗತ್ಯತೆಗಳನ್ನು ಮನದಲ್ಲಿಟ್ಟುಕೊಂಡು ಅದನ್ನು ಹೇಗೆ ರಚಿಸಬೇಕು ಎಂದು ಕಲಿಯುತ್ತೀರಿ
  • ವಿಶೇಷ ಒಪ್ಪಂದಗಳನ್ನು ಒಳಗೊಂಡಂತೆ ವಿವಿಧ ಬಗೆಯ ಒಪ್ಪಂದಗಳನ್ನು ಗುರುತಿಸುತ್ತೀರಿ
  • ಒಡಂಬಡಿಕೆ ಉಲ್ಲಂಘನೆಗಳು ಮತ್ತು ಲಭ್ಯವಿರುವ ಪರಿಹಾರಗಳನ್ನು ಪರಿಶೀಲಿಸುತ್ತೀರಿ
  • ಮುಖ್ಯವಾದ ಷರತ್ತುಗಳೊಂದಿಗೆ ಒಂದು ಒಪ್ಪಂದವನ್ನು ರಚಿಸುತ್ತೀರಿ

ತರಬೇತಿಯ ವಿಷಯಗಳು

 
 
  • ಪಠ್ಯಕ್ರಮ 1 – ಒಪ್ಪಂದಗಳ ಕಾನೂನಿನ ಪರಿಚಯ
  • ಪಠ್ಯಕ್ರಮ 2 – ಒಂದು ಒಪ್ಪಂದದ ಮುಖ್ಯ ಅಗತ್ಯತೆಗಳು
  • ಪಠ್ಯಕ್ರಮ 3 – ಕಾನೂನು ವಸ್ತುಗಳು, ಕಾನೂನಾತ್ಮಕ ಪರಿಗಣನೆ ಮತ್ತು ಶುಲ್ಕದ ಒಪ್ಪಿಗೆ
  • ಪಠ್ಯಕ್ರಮ 4 – ಒಪ್ಪಂದಗಳ ಬಗೆ
  • ಪಠ್ಯಕ್ರಮ 5 – ಸಾಮಾನ್ಯ ಒಪ್ಪಂದಗಳು– ಸಲಕರಣೆಗಳು ಮತ್ತು ರಚನೆಯ ಮಾರ್ಗಸುಚಿಗಳು
  • ಪಠ್ಯಕ್ರಮ 6 – ಒಂದು ಒಪ್ಪಂದದ ಅವಶ್ಯಕ ಷರತ್ತಿಗಳು
  • ಪಠ್ಯಕ್ರಮ 7 – ಒಪ್ಪಂದ ರಚನೆಯ ಅಂಶಗಳು ಮತ್ತು ಒಪ್ಪಂದ ಮಾತುಕತೆ
  • ಪಠ್ಯಕ್ರಮ 8 – ಮೊದಲ ಕರಡಿನ ರಚನೆ, ಸ್ಟಾಂಪಿಂಗ್ ಮತ್ತು ನೋಂದಣಿ
  • ಪಠ್ಯಕ್ರಮ 9 – ಒಂದು ಒಪ್ಪಂದ ವಿಸರ್ಜನೆ
  • ಪಠ್ಯಕ್ರಮ 10 – ಒಪ್ಪಂದದ ಉಲ್ಲಂಘನೆ- ಪರಿಹಾರಗಳು ಮತ್ತು ವಿವಾದ ಇತ್ಯರ್ಥ ಮಾರ್ಗಗಳು
  • ಪಠ್ಯಕ್ರಮ 11 – ಹಾನಿಯನ್ನು ತಗ್ಗಿಸುವುದು ಮತ್ತು ಒಪ್ಪಂದಗಳ ರದ್ದತಿ
  • ಪಠ್ಯಕ್ರಮ 12 – ವಿವಿಧ ಬಗೆಯ ಒಪ್ಪಂದಗಳ ರಚನೆಗೆ ಮಾರ್ಗಸೂಚಿಗಳು
  • ಪಠ್ಯಕ್ರಮ 13 – ಒಪ್ಪಂದ ಕಾನೂನು - ಸಂಕ್ಷಿಪ್ತವಾಗಿ
  • ಪಠ್ಯಕ್ರಮ 14 – ಅನುಬಂಧ
  • ಪ್ರಮಾಣಪತ್ರ ಪರೀಕ್ಷೆ/ಮೌಲ್ಯಮಾಪನ

CERTIFICATION

 

Honors Badge

ಈ ಕೋರ್ಸ್ ತೆಗೆದುಕೊಳ್ಳಬೇಕಾದವರು

  • ವಕೀಲರು
  • ಕಾನೂನು ವಿದ್ಯಾರ್ಥಿಗಳು
  • ಎಚ್.ಆರ್ ಮ್ಯಾನೇಜರುಗಳು
  • ಮಾರಾಟ-ಪೂರ್ವ ವೃತ್ತಿಪರರು
  • ವರ್ತಕರನ್ನು ನಿರ್ವಹಿಸುವ ವೃತ್ತಿಪರರು
  • ಸಂಸ್ಥೆಯ ಹಿರಿಯ ಆಡಳಿತ ಮಂಡಳಿಯವರು
  • ಯಾವುದೇ ಕ್ಷೇತ್ರದ ವೃತ್ತಿಪರರು
  • ಇತರೆ ಆಸಕ್ತಿಯುಳ್ಳ ಪಾಲುದಾರರು

ಮಟ್ಟ: ಆರಂಭಿಕರು ಮತ್ತು ಮಧ್ಯಮಹಂತದವರು

ಭಾಷೆ: ಕನ್ನಡ

ಅವಧಿ: 6 ತಿಂಗಳು

ಮೌಲ್ಯಮಾಪನ ಪದ್ದತಿ

ಕಲಿಕಾರ್ಥಿಗಳು ತರಬೇತಿಯ ಪ್ರಮಾಣಪತ್ರ ಪಡೆಯಲು ತರಬೇತಿಯ ಅಂತ್ಯದಲ್ಲಿನ ಪ್ರಮಾಣಪತ್ರ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸಬೇಕು ಮತ್ತು ಎಲ್ಲ ನಿಯೋಜನೆಗಳನ್ನು ಸಲ್ಲಿಸಬೇಕು.

ಲೇಖಕರ ಬಗ್ಗೆ

ಡಾ. ಗರಿಮಾ ತಿವರಿ ಒಬ್ಬ ಸಹಾಯಕ ಪ್ರಧ್ಯಾಪಕರಾಗಿ ಬೆನ್ನೆಟ್ ವಿಶ್ವವಿದ್ಯಾಲಯ, ಗ್ರೆಟರ್ ನಾಯಿಡಾ, ಉತ್ತರ ಪ್ರದೇಶ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಕೆಯು ನ್ಯಾಷನಲ್ ಲಾ ಇನ್ಸ್ ಟಿಟ್ಯೂಟ್ ಯುನಿವರ್ಸಿಟಿ, ಭೋಪಾಲ್ ಇಲ್ಲಿಂದ ಪದವಿಯನ್ನು ಪಡೆದಿದ್ದಾರೆ ಮತ್ತು ತನ್ನ ಎಲ್.ಎಲ್.ಎಂ ಅನ್ನು ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಕ್ರೈಂ ಅಂಡ್ ಜಸ್ಟಿಸ್ ರಿಸರ್ಚ್ ಇನ್ಸ್ ಟಿಟ್ಯೂಟ್, ಇಟಲಿನೊಂದಿಗೆ ಸಹಹೋಗದಲ್ಲಿರುವ ಇಂಟರ್ನ್ಯಾಷನಲ್ ಕ್ರೈಂ ಅಂಡ್ ಜಸ್ಟಿಸ್ ಫ್ರಂ ಯುನಿವರ್ಸಿಟಿ ಆಫ್ ಟೊರಿನೊ ನಲ್ಲಿ ಮುಂದಿವರಿಸಿರುತ್ತಾರೆ. ಆಕೆಯು ವಕೀಲ ಸಹಾಯಕಿಯಾಗಿ (ಬೋಧನ ವಿಭಾಗ) ನ್ಯಾಷನಲ್ ಜುಡೀಷಿಯಲ್ ಅಕಾಡೆಮಿ, ಭೋಪಾಲ್ ನಲ್ಲಿ ಮತ್ತು ಒಬ್ಬ ಹಿರಿಯ ಸಂಶೋಧಕರಾಗಿ ಲೆಕ್ಸಿಡೆಲ್-ಇಂಟರ್ನ್ಯಾಷನಲ್ ಪಾಲಿಸಿ ಕನ್ಸಲ್ಟಿಂಗ್, ಕೇಂಬ್ರಿಡ್ಜ್ ಮ್ಯಾಸಚೂಸೆಟ್ಸ್ ನಲ್ಲಿ ಕೆಲಸ ಮಾಡಿದ್ದಾರೆ.
ಅವರು ವಿವಿಧ ಸಹಭಾಗಿಗಳೊಂದಿಗೆ ತೊಡಗಿಕೊಳ್ಳುವ ಮೂಲಕ ಬಂದಿಖಾನೆಗಳಲ್ಲಿ ಶೂಷಣೆಗಳ, ಕಾನೂನು ನೆರವು ಮತ್ತು ಎಚ್.ಐ.ವಿ/ಏಡ್ಸ್ ಮೇಲೆ ಜಾಗೃತಿಯನ್ನು ಮೂಡಿಸಲು ಅಭಿವೃದ್ಧಿಪಡಿಸಿದ ಯೋಜನೆಗಳು ಮತ್ತು ಅಪರಾಧ ನ್ಯಾಯ ಸುಧಾರಣೆಯ ಕಾರ್ಯಗಳಿಗಾಗಿ 2012ರಲ್ಲಿ, ಇಂಟನ್ಯಾಷನಲ್ ಬ್ರಿಡ್ಜಸ್ ಟು ಜಸ್ಟಿಸ್, ಸ್ವಿಜರ್ಲ್ಯಾಂಡ್ ನಿಂದ ಜಸ್ಟಿಸ್ ಮೇಕರ್ ಫೆಲೋಷಿಪ್ ಪುರಸ್ಕಾರವು ಅವರಿಗೆ ದೊರೆತಿದೆ.

Learners who viewed in this course, also viewed:

Let’s Start Chatbot