Enquire Now!

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ

 

ಕಾರ್ಯಸ್ಥಳದ ನಡವಳಿಕೆಯನ್ನು 'ತಪ್ಪು' ಅಥವಾ 'ಕೆಟ್ಟದು' ಎಂದು ಗುರುತಿಸುವುದು ಮತ್ತು ವರ್ಗೀಕರಿಸುವುದು ಬಹಳ ಕಷ್ಟ ಏಕೆಂದರೆ ಇದು ಕಾರ್ಯಸ್ಥಳದ ಸಂಸ್ಕೃತಿಯಿಂದ ಸಹೋದ್ಯೋಗಿಗಳ ಸಾಂಸ್ಕೃತಿಕ ಹೊಂದಾಣಿಕೆಯವರೆಗೆ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿದೆ. ಆದರೆ, ಮಹಿಳೆಯರು ಮತ್ತು ಸಮೂಹದ ಮೇಲೆ ಲೈಂಗಿಕ ಕಿರುಕುಳ ಮುಂದುವರೆಯುತ್ತಿರುವ ಬಗ್ಗೆ ತೀವ್ರ ಅರಿವಿನ ಕೊರತೆಯಿದೆ. ಕಿರುಕುಳಕ್ಕೆ ಬಲಿಯಾದ ಮಹಿಳೆಯರು ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಆರೋಗ್ಯದ ಮೇಲೆ ಅಸಹಜ ಪರಿಣಾಮ ಎದುರಿಸುತ್ತಾರೆ. ಸಂತ್ರಸ್ತರು ತಮ್ಮ ಹಕ್ಕುಗಳು, ದೂರು ಪರಿಹಾರದ ತಂತ್ರಗಳು ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಮಿತಿಗಳ ಬಗ್ಗೆ ತಿಳಿದಿಲ್ಲದ ಕಾರಣ ಅನೇಕ ಘಟನೆಗಳು ವರದಿಯಾಗುವುದೇ ಇಲ್ಲ.

ಈ ಕೋರ್ಸ್ ಉದ್ಯೋಗಿಗಳು, ಮಾಲೀಕರು ಮತ್ತು ವಕೀಲರಿಗೆ ಕಾರ್ಯಸ್ಥಳದ ಲೈಂಗಿಕ ಕಿರುಕುಳ ಮತ್ತು ಅದಕ್ಕೆ ಸಂಬಂಧಿಸಿದ ಕಾನೂನಿನ ಪರಿಕಲ್ಪನೆಗಳ ಬಗ್ಗೆ ತಿಳಿಸುವಂತೆ ಮಾಡುವ ಗುರಿ ಹೊಂದಿದೆ. ಇದು ಪ್ರಶ್ನಾರ್ಹ ನಡವಳಿಕೆಯನ್ನು ಸಂಸ್ಥೆಯ ಉದ್ಯೋಗಿ ಗುರುತಿಸಲು ಮತ್ತು ದೂರು ದಾಖಲಿಸಲು ಪ್ರಕ್ರಿಯೆಗಳನ್ನು ತಿಳಿಸಲು ನೆರವಾಗುತ್ತದೆ. ಕೋರ್ಸ್ ಇಂತಹ ಘಟನೆಗಳನ್ನು ಪರಿಣಾಮಕಾರಿಯ್ಗಿ ನಿರ್ವಹಿಸಲು ಮತ್ತು ಕಾರ್ಯಸ್ಥಳದ ವಾತಾವರಣವನ್ನು ಆರೋಗ್ಯಕರವಾಗಿಡಲು ನಿವಾರಣಾ ಮಾನದಂಡಗಳನ್ನು ತೆಗೆದುಕೊಳ್ಳಲು ಮಾಲೀಕರಿಗೆ ಸಹ ನೆರವಾಗುತ್ತದೆ. ಯುವ ವಕೀಲರು ಲೈಂಗಿಕ ಕಿರುಕುಳ, ಪರಿಹಾರದ ತಂತ್ರಗಳು ಮತ್ತು ಕಾನೂನಿನ ಪರಿಣಾಮಗಳನ್ನು ತಿಳಿಯಲು ಈ ಕೋರ್ಸ್ ತೆಗೆದುಕೊಳ್ಳಬಹುದು.

ಕಲಿಕಾ ಫಲಿತಾಂಶಗಳು

 
 

ಈ ಕೋರ್ಸ್ ಪೂರ್ಣಗೊಳಿಸಿದ ನಂತರ, ನೀವು ಇವುಗಳಿಗೆ ಸಮರ್ಥರಾಗಿರುತ್ತೀರಿ:

  • ಲೈಂಗಿಕ ಕಿರುಕುಳದ ಭಿನ್ನ ನಡವಳಿಕೆ ಮತ್ತು ಘಟನೆಗಳನ್ನು ಗುರುತಿಸುವುದು
  • ದೂರು ನಿರ್ವಹಣಾ ಪ್ರಕ್ರಿಯೆ ವರ್ಗೀಕರಿಸುವುದು ಮತ್ತು ಪ್ರಾಯೋಗಿಕವಾಗಿ ತೋರಿಸುವುದು
  • ಕಾರ್ಯಸ್ಥಳದ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಸರಿಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸುವುದ್
  • ಕಾರ್ಯಸ್ಥಳದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೂಕ್ತ ಸಲಹೆ ನೀಡುವುದು

ಕೋರ್ಸ್ ಹೊರನೋಟ

 
 
  • ವಿಧಾನ 1 – ಕಾರ್ಯಸ್ಥಳದ ಲೈಂಗಿಕ ಕಿರುಕುಳಕ್ಕೆ ಪರಿಚಯ
  • ವಿಧಾನ 2 – ಕಾರ್ಯಸ್ಥಳದ ಲೈಂಗಿಕ ಕಿರುಕುಳ ತಡೆಗಟ್ಟುವುದು ಮತ್ತು ನಿರ್ಬಂಧಿಸುವುದು
  • ವಿಧಾನ 3 – ಕಾರ್ಯಸ್ಥಳದ ಲೈಂಗಿಕ ಕಿರುಕುಳದ ದೂರು ಸಲ್ಲಿಸುವ ಪ್ರಕ್ರಿಯೆ
  • ವಿಧಾನ 4 – ಸಮಾಪ್ತಿ
  • ಪ್ರಮಾಣಪತ್ರ ಪರೀಕ್ಷೆ/ಮಾನದಂಡ

CERTIFICATION

 

Honors Badge

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?

  • ಮಾಲೀಕರು
  • ಉದ್ಯೋಗಿಗಳು
  • ವಿದ್ಯಾರ್ಥಿಗಳು
  • ವಕೀಲರು
  • ಸಾಂಸ್ಥಿಕ ಹೊಂದಾಣಿಕೆಯಲ್ಲಿ ಕೆಲಸ ಮಾಡುವ ಅಥವಾ ಲೈಂಗಿಕ ಕಿರುಕುಳ ತಡೆಯಲು ಮತ್ತು ನಿರ್ಬಂಧಿಸಲು ಆಸಕ್ತಿಯುಳ್ಳ ಇತರ ಪಾಲುದಾರರು

ಹಂತ: ಆರಂಭಿಕ

ಭಾಷೆ: ಇಂಗ್ಲೀಷ್

ಅವಧಿ: 6 ತಿಂಗಳು

ಪರಿಶೀಲನಾ ವಿಧಾನ

ಪ್ರತೀ ವಿಧಾನದ ಅಂತ್ಯದಲ್ಲಿ ರಸಪ್ರಶ್ನೆಗಳು ಮತ್ತು ನಿಯೋಜನೆಗಳ ಮೂಲಕ ಪ್ರಗತಿ ಪರೀಕ್ಷಿಸುವುದು. ಕಲಿಕೆದಾರರು ಕೋರ್ಸ್ ಅಂತ್ಯದಲ್ಲಿ ಪರೀಕ್ಷೆ ತೆಗೆದುಕೊಳ್ಳಬೇಕು ಮತ್ತು ಕೋರ್ಸ್ ಪ್ರಮಾಣಪತ್ರ ಪಡೆಯಲು ಕನಿಷ್ಟ 50% ಅಂಕಗಳನ್ನು ಗಳಿಸಬೇಕು.

ಲೇಖಕರ ಕುರಿತು

ಹರ್ಲೀನ್ ಕೌರ್ ದೆಹಲಿ ಮತ್ತು ಚಂಡೀಘಡದಲ್ಲಿ 2013 ರಿಂದ ಲಿಂಗ ಹಕ್ಕುಗಳ ಕ್ಷೇತ್ರದಲ್ಲಿ ವಕೀಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಲೈಂಗಿಕ ಕಿರುಕುಳ ತಡೆಗಟ್ಟುವುದು ಮತ್ತು ಕಾರ್ಯಸ್ಥಳದಲ್ಲಿನ ವೈವಿಧ್ಯತೆಯ ಬಗ್ಗೆ ರಾಷ್ಟ್ರೀಯ ನ್ಯಾಯವಿಜ್ಞಾನ ವಿಶ್ವವಿದ್ಯಾನಿಲಯದ ಆನ್ ಲೈನ್ ಡಿಪ್ಲೊಮಾ ಕೋರ್ಸ್ ನ ಪರಿಕಲ್ಪನೆ ಮಾಡಿ ವಿನ್ಯಾಸಗೊಳಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ. ಇವರು ಸಂಸ್ಥೆಗಳ ಐಸಿಸಿಗಾಗಿ ಬಾಹ್ಯ ಸದಸ್ಯರಾಗಿ ಮತ್ತು ಶಿಕ್ಷಣತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ, ಇವರು ಲಿಂಗ ಮತ್ತು ಕಾನೂನಿನ ಹಕ್ಕುಗಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ವೃತ್ತಿಪರರಿಗೆ ಸಂದರ್ಶನ ನೀಡಿದ್ದಾರೆ.

Learners who viewed in this course, also viewed:

Let’s Start Chatbot